ಸಾಕ್ಷಿ
- ಜಿ.ಕೆ.ರವೀಂದ್ರಕುಮಾರ್
- Apr 21, 2024
- 1 min read
Updated: Jun 25, 2024
ನಿರರ್ಥಕದ ಸಾರ್ಥಕ ಬೋಧೆ ಹರಿಸುವ ಮಹಾ ಮೌನಿಯಂತೆ
ಹಾಗೆ ಹೀಗೆ ಹಾಯುವ ಚಂಚಲ ಆತ್ಮದ ಕತ್ತಲ ರೂಪವಾಗಿ
ಯಾಕೆನ್ನದ ಸಾಕೆನ್ನದ ಬದುಕಲ್ಲದ ಇರವು
ಇರವಲ್ಲ ಸರಿವು
ಅತ್ತ ಇತ್ತ ಅಡ್ಡ ಉದ್ದ ಸುತ್ತಿಕೊಂಡ ಸುಳುಹು
ಮೆತ್ತಿ ಕುರುಹು
ಅರ್ಥವಿರದ ಪದದಲ್ಲೂ ಪರಿಣಾಮದ ಸೊಲ್ಲು
ಬೇಕಲ್ಲದ ದಿನದಲ್ಲೂ ತಪ್ಪಿಲ್ಲದ ಗುರಿಯು
ನಿಂದಲ್ಲದ ನಿಲುವಿಲ್ಲದ ಕರುಳ ಹುರಿಯು
ಮಾತು ಕಾಯ
ಮೌನ ಪರಕಾಯ
ಪರಿವೆಯಿರದ ನಂಟಿನಲ್ಲಿ
ಅಣಕವಾಗುವ ಜೀವ
ಹೊತ್ತು ಸಾಗುವ ಹುಸಿ
ಸತ್ಯದ ಒಡಂಬಡಿಕೆಯಲ್ಲಿ
ಸದಾ ಹೊರಳು ಸಾಕ್ಷಿ
-ಜಿ.ಕೆ. ರವೀಂದ್ರಕುಮಾರ್
Comments